ಜಾಮ್ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಜಾಮ್ನಗರ ಜಿಲ್ಲೆಯ ವಂಟರಾ ಪ್ರಾಣಿ ರಕ್ಷಣಾ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಪುತ್ರ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಅವರು ಕೇಂದ್ರದ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿ, ಪುನರ್ವಸಿತ ಪ್ರಾಣಿಗಳೊಂದಿಗೆ ಸಮಯ ಕಳೆಯುವ ಮೂಲಕ ಅವರೊಂದಿಗೆ ಆಡುವುದು ಮತ್ತು ಆಹಾರ ನೀಡುವುದರಲ್ಲಿ ತೊಡಗಿಸಿಕೊಂಡರು. ಅವರು ಏಷ್ಯಾಟಿಕ್ ಸಿಂಹದ ಮರಿಗಳು, ವೈಟ್ ಲಯನ್ ಕಬ್, ಅಪರೂಪದ ಮತ್ತು ಅಪಾಯದಲ್ಲಿರುವ ಕ್ಲೌಡೆಡ್ ಲಿಯೋಪಾರ್ಡ್ ಕಬ್ ಮತ್ತು ಕರಕಲ್ ಕಬ್ಗಳಿಗೆ ಆಹಾರ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು MRI, CT ಸ್ಕ್ಯಾನ್ಗಳು ಮತ್ತು ICU ಗಳನ್ನು ಒಳಗೊಂಡಿರುವ ವಂಟರಾ ವನ್ಯಜೀವಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು.
ಸಿಂಹ ಮರಿಗಳಿಗೆ ಆಹಾರ ನೀಡಿದ ಪ್ರಧಾನಿ!
ಪ್ರಧಾನಿ ಮೋದಿ ವನ್ಯಜೀವಿಗಳ ಪುನರ್ವಸಿತ ಪ್ರದೇಶಕ್ಕೆ ಭೇಟಿ ನೀಡಿ, ಏಷ್ಯಾಟಿಕ್ ಸಿಂಹದ ಮರಿಗಳು, ಅಪರೂಪದ ವೈಟ್ ಲಯನ್ ಕಬ್, ಕ್ಲೌಡೆಡ್ ಲಿಯೋಪಾರ್ಡ್ ಮತ್ತು ಕರಕಲ್ ಕಬ್ಗಳಿಗೆ ಆಹಾರ ನೀಡಿದರು. ಪ್ರಾಣಿಗಳೊಂದಿಗೆ ಸಂವಹನವನ್ನು ಮಾಡುತ್ತಾ , ಅವರ ಆರೋಗ್ಯ ಮತ್ತು ರಕ್ಷಣೆಯ ಅಗತ್ಯತೆಗಳ ಬಗ್ಗೆ ಗಮನ ಹರಿಸಿದರು.
ಅಪರೂಪದ ಪ್ರಾಣಿಗಳ ಪುನರ್ವಸತಿ:
ವೈಟ್ ಲಯನ್ ಕಬ್, ಈ ಕೇಂದ್ರದಲ್ಲೇ ಜನಿಸಿದುದರಿಂದ, ಅದರ ಆರೋಗ್ಯ ಪರಿವೀಕ್ಷಣೆಯ ಜವಾಬ್ದಾರಿ ಕೇಂದ್ರ ಹೊಂದಿದೆ. ಅಲ್ಲದೆ, ಕರಕಲ್ (Caracal) ಎಂಬ ಅಪರೂಪದ ಪ್ರಭೇದದ ಪ್ರಾಣಿಗಳನ್ನು ಸಹ ಇಲ್ಲಿನ ಪೂರಕ ಪರಿಸರದಲ್ಲಿ ಸಾಕಲಾಗುತ್ತಿದೆ. ಅವುಗಳ ಸುರಕ್ಷತೆಯೊಂದಿಗೆ ಸ್ವಾತಂತ್ರ್ಯದ ವನ್ಯಜೀವನಕ್ಕೆ ಹಿಂತಿರುಗುಂತೆ ನೋಡಿಕೊಳ್ಳಲಾಗುತ್ತಿದೆ.
ವನ್ಯ ಪ್ರಾಣಿ ಸಂರಕ್ಷಣೆಗಾಗಿ ಮಹತ್ವದ ಹೆಜ್ಜೆ!
ಪ್ರಸ್ತುತ ವಂಟರಾ ಕೇಂದ್ರವು ಭಾರತದ ಅತಿದೊಡ್ಡ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿದ್ದು, ಅಪರೂಪದದಲ್ಲಿ ಅಪರೂಪ ಎನ್ನಬಹುದಾದ ಪ್ರಭೇದಗಳ ಸಂರಕ್ಷಣೆಯ ಮಹತ್ವದ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರ ಭೇಟಿ, ಪ್ರಾಣಿ ಸಂರಕ್ಷಣೆ ಮತ್ತು ಪರಿಸರ ಜಾಗೃತಿಯ ಬಗ್ಗೆ ಪ್ರಭಾವ ಬೀರುವ ಮಹತ್ವದ ಬೆಳವಣಿಗೆ ಎನ್ನಬಹುದಾಗಿದೆ.
ವಂಟರಾ ವನ್ಯಜೀವಿ ಆಸ್ಪತ್ರೆ:
ವಂಟಾರಾ ವನ್ಯ ಜೀವಿ ಸಂರಕ್ಷಣಾ ಕೇಂದ್ರದಲ್ಲಿ ಪ್ರಾಣಿಗಳಿಗೆ ಸುಸಜ್ಜಿತ ವೈದ್ಯಕೀಯ ಸೇವೆ ಸಿಗುವ ಹಿನ್ನೆಲೆಯಲ್ಲಿ ಆಧುನಿಕ ವ್ಯವಸ್ಥೆಗಳನ್ನು ಹೊಂದಿದ ಚಿಕಿತ್ಸಾಲಯ ಹಾಗೂ ಔಷಧಾಲಯವನ್ನು ನಿರ್ಮಾಣ ಮಾಡಲಾಗಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿ, MRI, CT ಸ್ಕ್ಯಾನ್, ICU ಸೇವೆಗಳೊಂದಿಗೆ ಉತ್ತಮವಾಗಿ ಸಜ್ಜಿತಗೊಂಡ ವನ್ಯಜೀವಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿ ಅಪಾಯದಲ್ಲಿರುವ ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ನೀಡುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರು. .
Publisher: ಕನ್ನಡ ನಾಡು | Kannada Naadu